ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಇಂದು ಬೆಳಗ್ಗೆ 6.30 ರಿಂದ 9.30 ಗಂಟೆಯವರೆಗೆ ರವರೆಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಸುಮಾರು 7 ಕಿ.ಮೀ ರಸ್ತೆಯನ್ನು ಕಾಲ್ನಡಿಗೆಯ ಮೂಲಕ ಮಿನರ್ವಾ ವೃತ್ತದಿಂದ ಡಾಯಾಗ್ನಲ್ ರಸ್ತೆ, ಸಜ್ಜನ್ ರಾವ್ ರಸ್ತೆ, ಕವಿ ಲಕ್ಷ್ಮೀಷ ರಸ್ತೆ, ನ್ಯಾಷನಲ್ ಕಾಲೇಜು ವೃತ್ತ, ಕೆ.ಆರ್.ರಸ್ತೆ, ನೆಟ್ಟಕಲ್ಲಪ್ಪ ವೃತ್ತ, ದೇವನ್ ಮಾದೇವ ರಸ್ತೆ, ಆರ್ಮುಗಂ ವೃತ್ತ, ಪಟ್ಟಾಲಮ್ಮ ದೇವಸ್ಥಾನ ರಸ್ತೆ ಹಾಗೂ ಸೌತ್ ಎಂಡ್ ವೃತ್ತದವರೆಗೆ ವರೆಗೆ ಪರಿಶೀಲನೆ ನಡೆಸಲಾಯಿತು.
ಮಿನರ್ವ ವೃತ್ತ ಪರಿಶೀಲನೆ:
• ಮಿನರ್ವ ವೃತ್ತ ಪಾದಚಾರಿ ಮಾರ್ಗದಲ್ಲಿ ಕರ್ಬ್ ಸ್ಟೋನ್ ಕುಸಿದಿರುವುದು ಹಾಗೂ ಹಾಳಾಗಿರುವುದನ್ನು ಕೂಡಲೆ ಸರಿಪಡಿಸಲು ಸೂಚನೆ.
• ರಸ್ತೆ ಬದಿಯಿರುವ ಮರದ ಕೊಂಬೆಗಳನ್ನು ರಾತ್ರಿ ವೇಳೆ ವಾಹನಗಳು ಸಂಚರಿಸದ ವೇಳೆ ಕಟಾವು ಮಾಡಿ ಕೊಂಬೆಗಳನ್ನು ತೆರವುಗೊಳಿಸಲು ಸೂಚನೆ
• ಬೀದಿ ದೀಪಗಳ ದುರಸ್ತಿ ಸಂಬಂಧ ಪ್ರತಿನಿತ್ಯ ವರದಿ ನೀಡಲು ವಿದ್ಯುತ್ ವಿಭಾಗದ ಅಧೀಕ್ಷಕ ಅಭಿಯಂತರರಿಗೆ ಸೂಚನೆ ನೀಡಿದರು
• ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದು, ಸಂಬಂಧಪಟ್ಟವರಿಗೆ ನೋಟೀಸ್ ನೀಡಿ ದಂಡ ವಿಧಿಸಬೇಕು. ಜೊತೆಗೆ ಒತ್ತುವರಿ ಜಾಗವನ್ನು ತೆರವುಗೊಳಿಸಲು ಸೂಚನೆ ನೀಡಿದರು
ಸಜ್ಜನ್ ರಾವ್ ವೃತ್ತ ಪರಿಶೀಲನೆ:
• ಸಜ್ಜನ್ ರಾವ್ ವೃತ್ತದಲ್ಲಿರುವ ಉದ್ಯಾನದ ಕಾಮಗಾರಿಯ ಸಾಮಗ್ರಿ ಪಾದಚಾರಿ ಮಾರ್ಗದಲ್ಲಿಯೇ ಹಾಕಿದ್ದು, ಅದನ್ನು ಕೂಡಲೆ ತೆರವುಗೊಳಿಸಲು ಸೂಚನೆ
• ಬಿಡಾಡಿ ದನ/ಹಸುಗಳನ್ನು ರಸ್ತೆ ಮೇಲೆ ಬಿಟ್ಟರೆ ಪಶುಪಾಲನಾ ವಿಭಾಗದ ಅಧಿಕಾರಿಗಳು ಪಾಲಿಕೆ ವಶಕ್ಕೆ ಪಡೆದು ದಂಡ ವಿಧಿಸಲು ಕ್ರಮ ಕೈಗೊಳ್ಳುವಂತೆ ಜಂಟಿ ಆಯುಕ್ತಕರಿಗೆ ಸೂಚನೆ ನೀಡಿದರು.
• ಸಜ್ಜನ್ ರಾವ್ ವೃತ್ತವನ್ನು ಅಭಿವೃದ್ಧಿ ಪಡಿಸಲು ಸೂಚನೆ
• ಕವಿ ಲಕ್ಷ್ಮೀಷ ರಸ್ತೆಯ ಎರಡೂ ಬದಿ ಪಾದಚಾರಿ ಮಾರ್ಗ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಸಾಧ್ಯವಾದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆ
• ಮರದ ಸುತ್ತಲು ಆರ್.ಸಿ.ಸಿ ಗೋಡೆ ನಿರ್ಮಿಸಿದ್ದು, ಅದನ್ನು ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡತೆ ಮರುವಿನ್ಯಾಸ ಮಾಡಲು ಅಧಿಕಾರಿಗಳಿಗೆ ಸೂಚನೆ
• ವಿದ್ಯುತ್ ತಂತಿ ಪಾದಚಾರಿಯ ಮೇಲ್ಭಾಗದಲ್ಲಿದ್ದು, ಅದನ್ನು ನೆಲದಡಿ ಅಳವಡಿಸಲು ಸೂಚನೆ
• ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲೇ ಹಾಕಿದ್ದು, ಅದನ್ನು ಕೂಡಲೆ ತೆಗದು ವರದಿ ನೀಡಲು ಸೂಚನೆ

ಜೈನ್ ಟೆಂಪಲ್ ರಸ್ತೆ ಪರಿಶೀಲನೆ:
• ನ್ಯಾಷನಲ್ ಕಾಲೇಜು ವೃತ್ತದಿಂದ ಜೈನ್ ಟೆಂಪಲ್ ರಸ್ತೆ ಬಳಿ ನೆಲದಡಿ ಒ.ಎಫ್.ಸಿ ಕೇಬಲ್ ಅಳವಡಿಸಲು ಚೇಂಬರ್ ನಿರ್ಮಿಸಿದ್ದು, ಚೇಂಬರ್ ಸ್ಥಳದಲ್ಲಿ ಪುನಶ್ಚೇತನ ಕಾರ್ಯವನ್ನು ಸಂಬಂಧಪಟ್ಟವರಿಂದಲೇ ಮಾಡಿಸಬೇಕು. ಜೊತೆಗೆ ಅವರಿಂದ ದಂಡ ವಸೂಲಿ ಮಾಡಲು ಸೂಚನೆ
• ಜೈನ್ ಟೆಂಪಲ್ ರಸ್ತೆಯಲ್ಲಿ ಮ್ಯಾನ್ ಓಲ್ ನಿಂದ ಸೀವೇಜ್ ನೀರು ರಸ್ತೆ ಮೇಲೆ ಬರುತ್ತಿದ್ದು, ಆ ಸಮಸ್ಯೆಯನ್ನು ಕೂಡಲೆ ಬಗೆಹರಿಸಲು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು
• ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲಿ ಹಾಕಿದ್ದು, ಅದನ್ನು ಪಾಲಿಕೆ ವಶಕ್ಕೆ ಪಡೆದು ಸಂಬಂಧಪಟ್ಟವರಿಗೆ ದಂಡ ವಿಧಿಸಲು ಸೂಚನೆ
ಅನಧಿಕೃತ ಶೆಡ್ ತೆರವು:
• ವಿವಿಪುರಂ ವಾರ್ಡ್ ಜೈನ್ ಟೆಂಪಲ್ ರಸ್ತೆಯಲ್ಲಿ ಪಾದಚಾರಿ ಮಾರ್ಗ ಹಾಗೂ ರಸ್ತೆಗೆ ಹೊಂದಿಕೊಂಡಂತೆ ನಿರ್ಮಿಸಿರುವ ಶೀಟಿನ ಶೆಡ್ ಅನ್ನು ಜೆಸಿಬಿ ಯಂತ್ರದ ಮೂಲಕ ಸ್ಥಳದಲ್ಲೇ ತೆರವುಗೊಳಿಸಲಾಯಿತು.

ನ್ಯಾಷನಲ್ ಕಾಲೇಜು ವೃತ್ತ ಪರಿಶೀಲನೆ(ಕೆ.ಆರ್ ರಸ್ತೆ ಮಾರ್ಗ):
• ನ್ಯಾಷನಲ್ ಕಾಲೇಜು ವೃತ್ತ ಮೆಟ್ರೋ ಫಿಲ್ಲರ್ ಬಳಿ ಕಸದ ಟ್ರಾನ್ಸ್ ಫರ್ ಸ್ಟೇಷನ್ ಇದ್ದು, ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಸ್ಥಳವನ್ನು ಶೀಟಿನಿಂದ ಮುಚ್ಚಿ ದುರ್ವಾಸನೆ ಬಾರದಂತೆ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚನೆ
• ಪಾದಚಾರಿ ಮಾರ್ಗದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಿದ್ದು, ಅದನ್ನು ತೆರವುಗೊಳಿಸಲು ಸೂಚನೆ
• ಕೆ.ಆರ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ನರ್ಸರಿ ಇಟ್ಟುಕೊಂಡಿದ್ದು, ಅದನ್ನು ಸಂಜೆಯೊಳಗಾಗಿ ತೆಗೆಸಬೇಕು. ಮತ್ತೆ ಈ ಸ್ಥಳದಲ್ಲಿ ಇಡಕೂಡದೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆ.ಆರ್ ರಸ್ತೆ ಪರಿಶೀಲನೆ:
• ಪೋಸ್ಟ್ ಆಫೀಸ್ ರಸ್ತೆ ಜಲಮಂಡಳಿಯಿಂದ ಮ್ಯಾನ್ ಓಲ್ ಕಾಮಗಾರಿ ಮಾಡಿದ್ದು, ರಸ್ತೆ ಪುನಶ್ಚೇತನ ಕಾರ್ಯ ಬಾಕಿಯಿದ್ದು, ಕೂಡಲೆ ಪೂರ್ಣಗೊಳಿಸಲು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
• ಪೋಸ್ಟ್ ಆಫೀಸ್ ರಸ್ತೆ ಬಳಿ ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ಗೋಡೆ ನಿರ್ಮಿಸಲು ಫಿಲ್ಲರ್ ಅಳವಡಿಸಿದ್ದು, ಅದನ್ನು ತೆರವುಗೊಳಿಸಿ ಕಟ್ಟಡ ಮಾಲೀಕರಿಗೆ ದಂಡ ವಿಧಿಸಲು ಸೂಚನೆ ನೀಡಿದರು

ಟಾಗೂರ್ ವೃತ್ತ ಪರಿಶೀಲನೆ:
• ಟಾಗೂರ್ ವೃತ್ತ ಬಿ.ಪಿ ವಾಡಿಯಾ ರಸ್ತೆ ಬದಿಯ ಪಾದಚಾರಿ ಮಾರ್ಗ ಸಂಪೂರ್ಣ ಹಾಳಾಗಿದ್ದು, ಅದನ್ನು ದುರಸ್ತಿ ಪಡುಸಲು ಸೂಚನೆ ನೀಡಿದರು
• ಬಸವನಗುಡಿ ಪೊಲೀಸ್ ಠಾಣೆ ಬಳಿ ಬಸ್ ನಿಲ್ದಾಣದ ಬಳಿ ಅಳವಡಿಸಿರುವ ಕಸದ ಬಿನ್ ಹಾಳಾಗಿದ್ದು, ಅದನ್ನು ಬದಲಾಯಿಸಲು ಸೂಚನೆ ನೀಡಿದರು
ನೆಟ್ಟಕಲ್ಲಪ್ಪ ವೃತ್ತ ಪರಿಶೀಲನೆ(ಕೃಷ್ಣ ರಾವ್ ಪಾರ್ಕ್ ಮಾರ್ಗ):
• ರಸ್ತೆ ಬದಿ ಬೃಹತ್ ಮರದ ಬುಡವನ್ನು ತೆರವುಗೊಳಿಸದೆ ಹಾಗೇಯೇ ಬಿಟ್ಟಿದ್ದು, ಬುಡ ಸಮೇತ ತೆರವುಗೊಳಿಸಲು ಸೂಚನೆ ನೀಡಿದರು
• ಕೃಷ್ಣ ರಾವ್ ಪಾರ್ಕ್ ಅನ್ನು ಪರಿಶೀಲಿಸಿ ವಾಯು ವಿಹಾರ ಮಾರ್ಗದಲ್ಲಿ ಕರ್ಬ್ ಸ್ಟೋನ್ ಅಳವಡಿಸುತ್ತಿದ್ದು, ಅದನ್ನು ತ್ವರಿತವಾಗಿ ಮುಗಿಸಲು ಸೂಚನೆ ನೀಡಿದರು
• ಕೃಷ್ಣ ರಾವ್ ಪಾರ್ಕ್ ರಸ್ತೆ ಮಾರ್ಗದಲ್ಲಿ ಸಂಪೂರ್ಣ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದು, ಬೀದಿ ಬದಿ ವ್ಯಾಪ್ಯಾರಿಗಳಿಗೆ ಬೇರಡೆ ಸ್ಥಳ ಗುರುತಿಸಿ ಪಾದಚಾರಿ ಮಾರ್ಗವನ್ನು ಮತ್ತೆ ಒತ್ತುವರಿಯಾಗದಂತೆ ನೋಡಿಕೊಳ್ಳಲು ಸೂಚನೆ
• ಹಾಳಾಗಿರುವ ಪಾದಚಾರಿ ಮಾರ್ಗ ದುರಸ್ತಿಪಡಿಸಲು ಸೂಚನೆ
• ಆರ್ಮುಗಂ ವೃತ್ತ ಕೃಷ್ಣ ರಾವ್ ಪಾರ್ಕ್ ಬಳಿ ಜಲಮಂಡಳಿಯಿಂದ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ತ್ವರಿತವಾಗಿ ಮುಗಿಸಲು ಸೂಚನೆ
ಆರ್ಮುಗಂ ವೃತ್ತ ಪರಿಶೀಲನೆ:
• ಆರ್ಮುಗಂ ವೃತ್ತದಲ್ಲಿ ಬೃಹತ್ ಅಪಾರ್ಟ್ಮೆಂಟ್ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಪಾದಚಾರಿ ಮಾರ್ಗದಲ್ಲಿ ಕಟ್ಟಡ ಸಾಮಗ್ರಿಗಳನ್ನು ಹಾಕಿದ್ದು, ಅದನ್ನು ಪಾಲಿಕೆ ವಶಕ್ಕೆ ಪಡೆಯಲು ಅಧಿಕಾರಿಗಳಿಗೆ ಸೂಚನೆ.
• ಪಟ್ಟಾಲಮ್ಮ ದೇವಸ್ಥಾನ ರಸ್ತೆಯಲ್ಲಿ ನೇತಾಡುವ ಕೇಬಲ್ ಗಳಿದ್ದು, ಅದನ್ನು ತೆರವುಗೊಳಿಸಲು ಸೂಚನೆ
• ಡ್ಯೂರೋಫ್ಲೆಕ್ಸ್ ನಿಂದ ಪಾದಚಾರಿ ಒತ್ತುವರಿ ಮಾಡಿಕೊಂಡು ಚರಂಡಿಯನ್ನು ಮುಚ್ಚಲಾಗಿದೆ. ಅದನ್ನು ತೆರವುಗೊಳಿಸಿ ಸಮರ್ಪಕ ಪಾದಚಾರಿ ಮಾರ್ಗ ನಿರ್ಮಾಣ ಮಾಡಲು ಸೂಚನೆ ನೀಡಿದರು
ಸೌತ್ ಎಂಡ್ ವೃತ್ತ ಪರಿಶೀಲನೆ:
• ಸೌತ್ ಎಂಡ್ ವೃತ್ತದ ಬಳಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಪಾದಚಾರಿ ಮಾರ್ಗದಲ್ಲಿ ಕಟ್ಟಡ ಸಾಮಗ್ರಿಗಳನ್ನು ಹಾಕಿದ್ದಾರೆ. ಅದನ್ನು ಪಾಲಿಕೆ ವಶಕ್ಕೆ ಪಡೆಯಲು ಅಧಿಕಾರಿಗಳಿಗೆ ಸೂಚನೆ.

ಸ್ಮಾರ್ಟ್ ಪಾರ್ಕಿಂಗ್ ಯೋಜನೆ ಕಾರ್ಯರೂಪಕ್ಕೆ ತರಲು ಸೂಚನೆ:
ನಗರದ ಎಂಟೂ ವಲಯದಲ್ಲಿ ಸ್ಮಾರ್ಟ್ ಪಾರ್ಕಿಂಗ್ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಅದನ್ನು ತ್ವರಿತವಾಗಿ ಟೆಂಡರ್ ಮಾಡಿ ಯೋಜನೆ ಕಾರ್ಯರೂಪಕ್ಕೆ ತರಲು ಪ್ರಧಾನ ಅಭಿಯಂತರರು ಹಾಗೂ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಅಭಿಯಂತರರಾದ ಪ್ರಹ್ಲಾದ್ ರವರಿಗೆ ಸೂಚನೆ ನೀಡಿದರು.
ಪರಿಶೀಲನೆ ನಡೆಸಿದ ಎಲ್ಲಾ ಕಡೆಯೂ ರಸ್ತೆಗೆ ಹಾಗೂ ಬೀದಿ ದೀಪಗಳಿಗೆ ಅಡ್ಡಲಾಗಿದ್ದ ಮರದ ಕೊಂಬೆಗಳನ್ನು ಅರಣ್ಯ ವಿಭಾಗದ ಸಿಬ್ಬಂದಿ ಪರಿಶೀಲನೆ ವೇಳೆಯೇ ಮರ ಕಟಾವು ಯಂತ್ರದ ಮೂಲಕ ತೆರವುಗೊಳಿಸಿದರು. ಜೊತೆಗೆ ಶಿಲ್ಟ್ ಅಂಡ್ ಟ್ರ್ಯಾಕ್ಟರ್ ಮೂಲಕ ರಸ್ತೆ ಬದಿ ಬಿದ್ದಿದ್ದ ತ್ಯಾಜ್ಯ/ಕಟ್ಟಡ ಭಗ್ನಾವಶೇಷಗಳನ್ನು ತೆರವುಗೊಳಿಸಲಾಯಿತು.
ಈ ವೇಳೆ ಸ್ಥಳೀಯ ಶಾಸಕರಾದ ಉದಯ್ ಬಿ. ಗರುಡಾಚಾರ್, ವಲಯ ಆಯುಕ್ತರಾದ ಜಯರಾಮ್ ರಾಯಪುರ, ವಲಯ ಜಂಟಿ ಆಯುಕ್ತರಾದ ಜಗದೀಶ್ ನಾಯ್ಕ್, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ವಲಯ ಮುಖ್ಯ ಅಭಿಯಂತರರಾದ ಮೋಹನ್ ಕೃಷ್ಣಾ, ಯೋಜನಾ ವಿಭಾಗದ ಮುಖ್ಯ ಅಭಿಯಂತರರಾದ ಲೋಕೇಶ್, ಪಾಲಿಕೆಯ ವಿದ್ಯುತ್, ಘನತ್ಯಾಜ್ಯ, ಆರೋಗ್ಯ, ಅರಣ್ಯ ವಿಭಾಗ, ಬೆಸ್ಕಾಂ, ಜಲಮಂಡಳಿ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
